Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all articles
Browse latest Browse all 6221

ಸ್ಯಾಂಡಲ್‌ವುಡ್‌ನಲ್ಲಿ ಬೆಳದಿಂಗಳ ಬಾಲೆ

$
0
0



ಬೆಳದಿಂಗಳ ಬಾಲೆ ಸುಮನ್ ನಗರಕರ್ ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ದಿಲ್ಲದೇ ಅವರು ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಸುನೀಲ್ ಕುಮಾರ್ ದೇಸಾಯಿ ಚಿತ್ರವೂ ಒಂದು. ಬಹುದಿನಗಳ ನಂತರ ದೇಸಾಯಿ ಅವರು ಮತ್ತೆ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹೀಗಾಗಿಯೇ ತಮ್ಮ ಸೂಪರ್ ಹಿಟ್ ಸಿನಿಮಾದ ನಾಯಕ ಮತ್ತು ನಾಯಕಿಯನ್ನು ಹೊಸ ಚಿತ್ರಕ್ಕೂ ಆಯ್ಕೆ ಮಾಡಿಕೊಂಡಿದ್ದಾರೆ.

ಮೊನ್ನೆಯಷ್ಟೇ ನಡೆದ ದೇಸಾಯಿ ಸಿನಿಮಾದ ಶೀರ್ಷಿಕೆ ಅನಾವರಣ ಕಾರ‌್ಯಕ್ರಮಕ್ಕೆ ಸುಮನ್ ಆಗಮಿಸಿದ್ದರು. ಅನಂತ್ ನಾಗ್ ಜತೆ ಛಾಯಾಗ್ರಾಹಕರಿಗೆ ಫೋಸ್ ಕೊಟ್ಟು ಸಂಭ್ರಮ ಹಂಚಿಕೊಂಡರು. ಅಲ್ಲದೇ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಚಿತ್ರದಲ್ಲೂ ಅಭಿನಯಿಸುತ್ತಿರುವುದಾಗಿ ಹೇಳಿಕೊಂಡರು.

ಸಿನಿಮಾ ರಂಗದಿಂದ ದೂರವಾದ ನಂತರ, ಸುಮನ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ತಮ್ಮ ನೆಚ್ಚಿನ ನಿರ್ದೇಶಕರ ಒತ್ತಾಸೆಗೆ ಮತ್ತೆ ಸಿನಿಮಾ ರಂಗಕ್ಕೆ ಬಂದಿದ್ದಾರೆ.


Viewing all articles
Browse latest Browse all 6221


<script src="https://jsc.adskeeper.com/r/s/rssing.com.1596347.js" async> </script>