Quantcast
Channel: Lifestyle, Latest Trends- ಟ್ರೆಂಡ್ಸ್, ಜೀವನಶೈಲಿ
Viewing all articles
Browse latest Browse all 6221

ಪವನ್ ಚಿತ್ರದಲ್ಲಿ ರಂಗಿನ ರಾಧಿಕಾ

$
0
0

ರಂಗಿತರಂಗ ಚಿತ್ರಖ್ಯಾತಿಯ ರಂಗಭೂಮಿ ಕಲಾವಿದೆ ರಾಧಿಕಾ ಚೇತನ್ ಈಗ ಸದ್ದಿಲ್ಲದೆ, ಲೂಸಿಯಾ ಪವನ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಿದ್ದಾರೆ. ನಿಕೋಟಿನ್ ಫಾರ್ಮುಲಾ ಇಟ್ಟುಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ದ ಪವನ್ ಕುಮಾರ್ ಈಗ 'ಯೂ ಟರ್ನ್' ಹೊಡೆದಿದ್ದಾರೆ.

* ಪದ್ಮಾ ಶಿವಮೊಗ್ಗ
ಲೂಸಿಯಾ ಖ್ಯಾತಿಯ ಪವನ್ ನಿರ್ದೇಶನದ ಹೊಸ ಚಿತ್ರದಲ್ಲಿ ರಾಧಿಕಾ ಚೇತನ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್‌ನಲ್ಲೂ ಪಾಲ್ಗೊಂಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ರಂಗಿತರಂಗ ಚಿತ್ರದ ಈ ನಾಯಕಿ, ತಮ್ಮ ಅಭಿನಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದ್ದರು. ರಂಗಭೂಮಿ ಕಲಾವಿದೆಯಾದ ಇವರು ನಂತರ ಯಾವ ಚಿತ್ರದಲ್ಲೂ ನಟಿಸುವ ವಿಚಾರ ಕೇಳಿಬಂದಿರಲಿಲ್ಲ.

ನಿರ್ದೇಶಕ ಪವನ್ ಲೂಸಿಯಾ ನಂತರ ಅದೇ ರೀತಿಯ ಇನ್ನೊಂದು ಸಿನಿಮಾ ಮಾಡಲಿದ್ದಾರೆಂದು ಸುದ್ದಿಯಾಗಿತ್ತು. ಹಲವು ತಿಂಗಳಾದರೂ ಅದು ಸೆಟ್ಟೇರುವ ಸೂಚನೆ ಕಂಡುಬಂದಿರಲಿಲ್ಲ. ಈಗ ಅದರ ಬದಲಿಗೆ ಇನ್ನೊಂದು ಹೊಸ ಚಿತ್ರವನ್ನು ಪವನ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ 'ಯೂ ಟರ್ನ್' ಎಂದು ಹೆಸರಿಟ್ಟಿದ್ದಾರೆ. ಅಲ್ಲದೇ ಈ ಸಿನಿಮಾದ ಯಾವುದೇ ಮಾಹಿತಿ ಬಹಿರಂಗ ಪಡಿಸದೆ, ಸದ್ದಿಲ್ಲದೆ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ.

ಲೂಸಿಯಾ ಚಿತ್ರ ದೇಶಾದ್ಯಂತ ಸುದ್ದಿಯಾಗಿತ್ತು. ಚಿತ್ರದ ಕತೆ ಮತ್ತು ವಿಭಿನ್ನ ನಿರೂಪಣೆಯಿಂದ ಎಲ್ಲರ ಗಮನ ಸೆಳೆದಿತ್ತು. ಪರಭಾಷೆಗೂ ರಿಮೇಕ್ ಆಗಿದ್ದ ಈ ಚಿತ್ರವು ಪವನ್‌ಗೆ ಹೆಸರು ತಂದುಕೊಟ್ಟಿತ್ತು. ಸಹಜವಾಗಿಯೇ ನಂತರದ ಚಿತ್ರದ ಬಗ್ಗೆ ಎಲ್ಲರಲ್ಲೂ ಕುತೂಹಲ ಮೂಡಿತ್ತು. ಅದಾದ ನಂತರ ಸೈಕಲಾಜಿಕ್ ಥ್ರಿಲ್ಲರ್ ಸಬ್ಜೆಕ್ಟ್ ಇರುವ ನಿಕೋಟಿನ್ ಫಾರ್ಮುಲಾ ಕುರಿರು ಚಿತ್ರ ಮಾಡಲಿದ್ದಾರೆಂದೂ ಹೇಳಲಾಗಿತ್ತು. ಈ ಚಿತ್ರಕ್ಕೆ ಧನಂಜಯ್ ನಾಯಕ ಎಂದೂ ಸುದ್ದಿಯಾಗಿತ್ತು. ಧನಂಜಯ್ ಅವರ ಡೇಟ್ಸ್ ಸಿಗಲಿಲ್ಲ ಎಂಬ ಕಾರಣಕ್ಕೆ ಹೊಸ ಚಿತ್ರ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಇದು ಕೂಡಾ ಥ್ರಿಲ್ಲರ್ ಸಿನಿಮಾ ಆಗಿರುವ ಸಾಧ್ಯತೆಗಳಿವೆ.


Viewing all articles
Browse latest Browse all 6221


<script src="https://jsc.adskeeper.com/r/s/rssing.com.1596347.js" async> </script>